ತೆಲುಗಿನ ಜನಪ್ರಿಯ ನಟರಾದ ವೆಂಕಟೇಶ್ ದಗ್ಗುಬಾಟಿ, ಅವರ ಸೋದರಳಿಯ ಮತ್ತು ನಟ ರಾಣಾ ದಗ್ಗುಬಾಟಿಗೆ ಸಂಕಷ್ಟ ಎದುರಾಗಿದೆ.
ದಗ್ಗುಬಾಟಿ ಕುಟುಂಬದಿಂದ ಲೀಸ್ ಪಡೆದಿರುವ ಜಮೀನಿನಲ್ಲಿ ಉದ್ಯಮಿಯೊಬ್ಬರು ನಡೆಸುತ್ತಿದ್ದ ಹೋಟೆಲ್ ವೊಂದರ ಧ್ವಂಸಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಡಿ. ಸುರೇಶ್ ಸೇರಿದಂತೆ ವೆಂಕಟೇಶ್, ರಾಣಾ ದುಗ್ಗುಬಾಟಿಯ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ
ದಗ್ಗುಬಾಟಿ ಕುಟುಂಬದಿಂದ ಲೀಸ್ ಪಡೆದಿರುವ ಜಮೀನಿನಲ್ಲಿ ಉದ್ಯಮಿಯೊಬ್ಬರು ನಡೆಸುತ್ತಿದ್ದ ಹೋಟೆಲ್ ವೊಂದರ ಧ್ವಂಸಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಡಿ. ಸುರೇಶ್ ಸೇರಿದಂತೆ ವೆಂಕಟೇಶ್, ರಾಣಾ ದುಗ್ಗುಬಾಟಿಯ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಸಂಬಂಧ ಸ್ಥಳೀಯ ನ್ಯಾಯಾಲಯವೊಂದರ ನಿರ್ದೇಶನದ ನಂತರ ಕ್ರಿಮಿನಲ್ ಪಿತೂರಿ, ಮನೆ ಅತಿಕ್ರಮಣ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಜನವರಿ 11 ರಂದು ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ದೂರುದಾರ BRS ಶಾಸಕರ ಖರೀದಿಗೆ ಪ್ರಯತ್ನಿಸಿದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. 2022ರ ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು. ಬಳಿಕ ಅವರಿಗೆ ಜಾಮೀನು ಮಂಜೂರಾಗಿತ್ತು. ದಗ್ಗುಬಾಟಿ ಕುಟುಂಬವು 2014 ರಲ್ಲಿ ಫಿಲ್ಮ್‌ನಗರದ ಪ್ಲಾಟ್‌ನಲ್ಲಿ ಭೂಮಿಯನ್ನು ಲೀಸ್ ಗೆ ನೀಡಿತ್ತು. ನೋಂದಾಯಿತ ಗುತ್ತಿಗೆ ಪತ್ರ ನೀಡಿದ ನಂತರ ಅಲ್ಲಿ ಹೋಟೆಲ್ ಪ್ರಾರಂಭಿಸಲಾಗಿತ್ತು ಎಂದು ದೂರುದಾರರು ಹೇಳಿದ್ದಾರೆ.