ವಿಜಯೇಂದ್ರರನ್ನು ಸಿಎಂ ಮಾಡಲಲ್ಲ: ರೇಣುಕಾಚಾರ್ಯ

ದಾವಣಗೆರೆ: ನಗರದಲ್ಲಿಂದು ಮಾಧ್ಯಮದವರೊಡನೆ ಮಾತಾಡಿದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿಯನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಯನ್ನು ಸಂಘಟಿಸಲು ಮತ್ತು ಪುನಃ ಅಧಿಕಾರಕ್ಕೆ ತರಲು ಬಿಎಸ್ ಯಡಿಯೂರಪ್ಪನವರು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಲಿದ್ದಾರೆಯೇ ಹೊರತು ಬಿವೈ ವಿಜಯೇಂದ್ರರನ್ನು ಮುಖ್ಯಮಂತ್ರಿ ಮಾಡಲು ಅಲ್ಲ, ಅವರನ್ನು ಸಿಎಂ ಮಾಡಬೇಕೆನ್ನುವುದು ರಾಜ್ಯದ ಕಾರ್ಯಕರ್ತರ ಮತ್ತು ಜನರ ಸಂಕಲ್ಪವಾಗಿದೆ, ಅವರನ್ನು ಮುಖ್ಯಮಂತ್ರಿ ಮಾಡೇ ಮಾಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು. ಮಹಾನ್ ನಾಯಕನೊಬ್ಬ ಸೋತ ಶಾಸಕರ ಸಭೆಯ ನಂತರ 17 ಜನ ತನಗೆ ಫೋನ್ ಮಾಡಿ ವಿಜಯೇಂದ್ರನ ಒತ್ತಾಯಕ್ಕೆ ಮಣಿದು ಸಭೆಗೆ ಹೋಗಿದ್ದೆವು ಅಂದಿದ್ದಾನೆ, ಬೇರೆ ಪಕ್ಷದಲ್ಲಿದ್ದ ಅವನು ಯಡಿಯೂರಪ್ಪನವರ ಕಾಲು ಹಿಡಿದು ಬಿಜೆಪಿ ಸೇರಿದ್ದು ತನಗೆ ಗೊತ್ತಿಲ್ಲವೇ ಎಂದು ರೇಣುಕಾಚಾರ್ಯ ಹೇಳುತ್ತಾರೆ.

error: Content is protected !!