ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ದಾಳಿ

Spread the love

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಚಾಕು ಇರಿತವಾಗಿದ್ದು, ನಟ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೈಫ್‌ಗೆ ಆರು ಬಾರಿ ಚಾಕು ಇರಿಯಾಗಿದ್ದು, ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಧವಾರ ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬಾಂದ್ರಾದಲ್ಲಿರುವ ನಟನ ಮನೆಗೆ ದರೋಡೆಗೆಂದು ಕಳ್ಳರು ನುಗ್ಗಿದ್ದಾಗ ಘಟನೆ ಸಂಭವಿಸಿದೆ. ಸದ್ಯ ಮುಂಬೈನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಧ್ಯರಾತ್ರಿ ಸುಮಾರು 2.30ರ ಸುಮಾರಿಗೆ ಮನೆಗೆ ನುಗ್ಗಿದ ದರೋಡೆಕೋರರು, ದರೋಡೆ ಮಾಡಲು ಯತ್ನಿಸಿದ್ದಾರೆ. ಆದರೆ ಸೈಫ್‌ ಅದನ್ನು ತಡೆಯಲು ಪ್ರಯತ್ನಸಿದ್ದರಿಂದ ಅವರ ಮೇಲೆ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಸೈಫ್‌ಗೆ ಗಾಯವಾಗಿದೆ. ಕರೀನಾ ಹಾಗೂ ಮಕ್ಕಳು ಸುರಕ್ಷಿತವಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಮುಂಬೈ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಸುತ್ತ ಮುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮನೆಯ ಹೊರಗೆ ಸ್ನೀಪರ್‌ ನಾಯಿಗಳನ್ನು ಕರೆತರಲಾಗಿದ್ದು, ಇಂಚಿಂಚೂ ಪರಿಶೀಲನೆ ನಡೆಸಲಾಗುತ್ತಿದೆ.
ಸದ್ಯದ ಮಾಹಿತಿಯ ಪ್ರಕಾರ ಮೂವರು ದರೋಡೆಕೋರರಿದ್ದು, ಒಬ್ಬ ಮನೆಯೊಳಗೆ ನುಗ್ಗಿರುವ ಶಂಕೆಯಿದೆ. ಈ ನಡುವೆ ಪೊಲೀಸರು ಶಾಕಿಂಗ್‌ ಮಾಹಿತಿಯನ್ನು ಹೊರಹಾಕಿದ್ದು, ಈ ಕೃತ್ಯಕ್ಕೆ ಮನೆಯ ಸಹಾಯಕರೊಬ್ಬರ ಸಹಕಾರವಿರಬಹುದು ಎಂದು ಶಂಕಿಸಿದ್ದಾರೆ.

error: Content is protected !!