ಫ್ರಾಂಚೈಸಿ ಚಿಂತೆ ಹೆಚ್ಚಿಸಿದ ಜಿತೇಶ್ ಶರ್ಮಾ

Spread the love

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ದಿನೇಶ್ ಕಾರ್ತಿಕ್ ಅವರ ಫಿನಿಷಿಂಗ್ ಪಾತ್ರವನ್ನು ಜಿತೇಶ್ ಶರ್ಮಾ ನಿಭಾಯಿಸುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ ಇತ್ತೀಚಿನ ಅವರ ಪ್ರದರ್ಶನವು ಆರ್ ಸಿಬಿ ತಂಡದ ಫ್ರಾಂಚೈಸಿಯ ಟೆನ್ಷನ್ ಹೆಚ್ಚಿಸಿದೆ.
ದುಬೈನಲ್ಲಿ 18ನೇ ಐಪಿಎಲ್ ಟೂರ್ನಿಯ ನಿಮಿತ್ತ ನಡೆದ ಮೆಗಾ ಹರಾಜಿನಲ್ಲಿ ವಿದರ್ಭ ಆಟಗಾರನನ್ನು 11 ಕೋಟಿಗೆ ಬಿಕರಿ ಮಾಡಿಕೊಂಡು ಫಿನಿಷಿಂಗ್ ಪಾತ್ರ ನೀಡಲು ಫ್ರಾಂಚೈಸಿ ಯೋಚಿಸಿತ್ತು. ಆದರೆ ಇತ್ತೀಚೆಗೆ ನಡೆದ ವಿಜಯ್ ಹಝಾರೆ ಟ್ರೋಫಿಯಲ್ಲಿ ತಮ ಬ್ಯಾಟಿಂಗ್ ಚಮತ್ಕಾರ ತೋರುವಲ್ಲಿ ಜಿತೀಶ್ ಶರ್ಮಾ ಸಂಪೂರ್ಣವಾಗಿ ಎಡವಿದ್ದಾರೆ.
ವಿಜಯ್ ಹಝಾರೆ ಟ್ರೋಫಿಯಲ್ಲಿ 6 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿತೇಶ್ ಶರ್ಮಾ, 1 ಅರ್ಧಶತಕ ಸೇರಿದಂತೆ 183 ರನ್ ಗಳಿಸಿದ್ದರು. 112.96 ಸ್ಟ್ರೈಕ್ ಹೊಂದಿದ್ದಾರೆ. ಅಲ್ಲದೆ ಫೈನಲ್ ಪಂದ್ಯದಲ್ಲೂ ಕೂಡ ಕರ್ನಾಟಕ ವಿರುದ್ಧ ಪಂದ್ಯ ಗೆಲ್ಲಲು 349 ರನ್ ಬೃಹತ್ ಗುರಿ ಪಡೆದಿತ್ತು. ಆದರೆ 312 ರನ್ ಗಳಿಗೆ ಸೀಮಿತಗೊಂಡ ವಿದರ್ಭ 36 ರನ್ ಸೋಲು ಕಂಡಿತು.

error: Content is protected !!