ಹಬ್ಬಗಳ ಸಾಲಿನ ಶ್ರಾವಣಮಾಸ ಪ್ರಾರಂಭವಾಗಿದೆ, ಹೂವಿನ ಬೆಲೆ ಗಗನಕ್ಕೇರಿದೆ ಆದರೆ ಪುಷ್ಪ ಕೃಷಿ ಮಾಡಿದ ರೈತರು ಬಂಪರ್ ಹೊಡೆದಿದ್ದಾರೆ.
ನೆಲಮಂಗಲ ತಾಲ್ಲೂಕಿನ ಎಲೇಕ್ಯಾತನಹಳ್ಳಿಯ ರೈತ ವೇಣುಗೋಪಾಲ್ ಸುಮಾರು 11 ಟನ್ ವಿವಿಧ ಜಾತಿಯ ಹೂ ಬೆಳೆದು 1 ಲಕ್ಷ ಆದಾಯ ಪಡೆದು, ಇನ್ನು 03-04 ಆದಾಯ ಗಳಿಕೆಯಲ್ಲಿ ನಿರೀಕ್ಷೆಯಲ್ಲಿದ್ದಾನೆ.
ನಾಲ್ಕು ಪ್ರಭೇದಗಳ ಹೂ: ಸೇವಂತಿಗೆ ಹೂ ನ ಹೈಬ್ರಿಡ್ ತಳಿ ಸೆಂಟಲ್, ಚಾಕಲೇಟ್, ಸುವರ್ಣ ಎಲ್ಲೋ ಹಾಗೂ ಗುಲಾಬಿಯ ವಿವಿಧ ತಳಿಯನ್ನು 1.5 ಎಕರೆ ಜಾಗದಲ್ಲಿ ಹೂ ಬೆಳೆದು ಹೂ ಗಳ ವರಮಹಾಲಕ್ಷ್ಮಿ ಆಚರಿಸುತ್ತಿದ್ದಾರೆ.
ಕೆಜಿಗೆ 250 ರೂಪಾಯಿ:ಸಾಲು ಸಾಲು ಹಬ್ಬಗಳ ಹಿನ್ನಲೆ ಹಾಗೂ ಮುಂಗಾರು ಮಳೆ ಕೊರತೆ ಹಿನ್ನಲೆ ಕೆಜಿಗೆ 250-300 ರೂಪಾಯಿವರೆಗೆ ಹೂ ಮಾರಾಟ ವಾಗುತ್ತಿದೆ, ಗುಲಾಬಿ ಮತ್ತು ಸೆಂಟಲ್ ಹೂ ವಿಗೆ ಭಾರಿ ಬೇಡಿಕೆ ಎನ್ನುತ್ತಾರೇ ಹೂ ಬೆಳೆದ ರೈತ.