ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ರಾಜ್ಯಮಟ್ಟದ 11ನೇ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ನಮ್ಮವರು ನಮ್ಮ ಹೆಮ್ಮೆ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲೆಯಿಂದ ಸಮಾಜ ಸೇವೆಗಾಗಿ ಡಾ. ಎಂ.ಸಿ ಶಶಿಕಾಂತ್, ಎಸ್ ಪಿ ಸತ್ಯನಾರಾಯಣ ರಾವ್, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸರ್ ಎಂ ವಿ ಕಾಲೇಜಿನ ಗೌರವ ಕಾರ್ಯದರ್ಶಿ ಎಸ್.ಜೆ ಶ್ರೀಧರ್, ವಾಣಿಜ್ಯ ಕ್ಷೇತ್ರದ ಸಾಧನೆಗಾಗಿ ಉದ್ಯಮಿ ಸಚಿನ್ ಆಚಾರ್ಯ ಹಾಗೂ 160 ಬಾರಿ ರಕ್ತದಾನ ಮಾಡಿರುವ ಆದಿ ಕೇಶವಶಾಸ್ತಿ ಮತ್ತು 100 ಬಾರಿ ರಕ್ತದಾನ ಮಾಡಿರುವ ಅನಿಲ್ ಬಾರಂಗಳ್ ಪುರಸ್ಕರಿಸಲಾಯಿತು ಎಂದು ಬ್ರಾಹ್ಮಣ ಸಮಾಜ ಸೇವಾ ಸಂಘದ ದಾವಣಗೆರೆಯ ಗೌರವ ಕಾರ್ಯದರ್ಶಿ ಎಸ್. ಗೋಪಾಲದಾಸ್ ತಿಳಿಸಿದ್ದಾರೆ.