ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಲಕ್ಷಾಂತರ ಆಸ್ತಿಗಳ ಖಾತೆಗಳನ್ನು ಡಿಜಿಟಲೀಕರಣಗೊಳಿಸಿದೆ. ಈ ಕರ‍್ಯ ಮುಂದುವರಿದಿದ್ದು, ಅವುಗಳನ್ನು ವಿತರಣೆ ಕರ‍್ಯಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಹೊಸ ನರ‍್ಧಾರ ಪ್ರಕಟಿಸಿದೆ. ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್‌ಗಳಲ್ಲಿ ಇ-ಖಾತೆ ನೀಡಿದಂತೆ ಇದೀಗ ಸೈಬರ್ ಕೆಫೆಗಳಲ್ಲಿ ಸಹ ಇ-ಖಾತಾ ನೀಡುವುದಾಗಿ ತಿಳಿಸಿದೆ.
ಖಾಸಗಿ ಸಹಭಾಗಿತ್ವದಲ್ಲಿ ಇ-ಖಾತೆ ನೀಡಲು ಬಿಬಿಎಂಪಿ ನರ‍್ಧರಿಸಿದ್ದು, ಶೀಘ್ರವೇ ಈ ಕುರಿತು ಆದೇಶ ಪ್ರಕಟಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇದರಿಂದ ಗ್ರಾಹಕರು/ಆಸ್ತಿ ಮಾಲೀಕರು ಮುಂದಿನ ದಿನಗಳಲ್ಲಿ ಬೆಂಗಳೂರು ಒನ್ ನಂತೆ ಹತ್ತಿರದ ಸೈಬರ್ ಕೆಫೆಗಳಲ್ಲೂ ಇ-ಖಾತೆ ಲಭ್ಯವಿವೆ.
ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಆಸ್ತಿ ವಿವರಗಳನ್ನು ನಕಲಿ ಮಾಡಿ ಇತರರಿಗೆ ಆಸ್ತಿ ಮಾರಾಟ, ಇನ್ನಿತರ ಅಕ್ರಮಗಳ ತಡೆಗೆ ಮುಂದಾದ ಬಿಬಿಎಂಪಿ ಆಸ್ತಿಗಳ ವಿವರವನ್ನು ಡಿಜಿಟಲೀಕರಣಗೊಳಿಸುತ್ತಿದೆ. ಡಿಜಿಟಲೀಕರಣಗೊಂಡ ಉದ್ದೇಶಿತ ೨೨ ಲಕ್ಷ ಇ-ಖಾತಾ ವಿತರಣೆ ಪೈಕಿ ಕೇವಲ ಒಂದು ಲಕ್ಷಕ್ಕೂ ಹೆಚ್ಚಿನ ಇ-ಖಾತಾಗಳು ವಿತರಣೆ ಆಗಿದೆ. ಈ ಕರ‍್ಯಕ್ಕೆ ವೇಗ ನೀಡುವ ಉದ್ದೇಶದಿಂದ ಸೈಬರ್ ಕೆಫೆಗಳಲ್ಲೂ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು. ಇ-ಖಾತಾ ವಿತರಣೆ ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ತಲುಪುವ ಉದ್ದೇಶದಿಂದ ಈ ನರ‍್ಧಾರ ಮಾಡಲಾಗಿದೆ. ರಾಜ್ಯದಲ್ಲಿ ಪಹಣಿ ವಿತರಣೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಂದರೆ ಖಾಸಗಿ ಯವರು ನೀಡಬಹುದಾಗಿದೆ. ಅದರಂತೆ ಪಾಸ್‌ಪರ‍್ಟ್ ವಿತರಣೆಯನ್ನು ಖಾಸಗಿಯವರಿಗೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಡಿಜಿಟಲೀಕರಣಗೊಂಡ ಇ-ಖಾತಾಗಳನ್ನು ಸೈಬರ್ ಸೆಂಟರ್‌ಗಳಲ್ಲೂ ಶೀಘ್ರವೇ ವಿತರಣೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.