ಕೆರೆಗೆ ಈಜಲು ತೆರಳಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾಗಿರುವ ದಾರುಣ ಘಟನೆ ತಾಲೂಕಿನ ಕರ‍್ಕಿ ಗ್ರಾಮದ ಬಳಿ ನಡೆದಿದೆ. ದಾವಣಗೆರೆಯ ಗುರುಕುಲ ಶಾಲೆಯ ಇಬ್ಬರು ವಿದ್ಯರ‍್ಥಿಗಳು ಭಾನುವಾರ ರಜೆ ಇದ್ದ ಹಿನ್ನೆಲೆ ಈಜಾಡಲು ಕೆರೆಗೆ ಹೋಗಿದ್ದರು. ಈ ವೇಳೆ ದರ‍್ಘಟನೆ ಸಂಭವಿಸಿದೆ.
ಮೃತರನ್ನು ಯತೀಂದ್ರ ಮತ್ತು ಪಾಂಡು ಎಂಬುದಾಗಿ ಗುರುತಿಸಲಾಗಿದೆ. ಮೃತ ವಿದ್ಯರ‍್ಥಿಗಳು ತರ‍್ಚಘಟ್ಟದ ಗುರುಕುಲ ಶಾಲೆಯ ವಿದ್ಯರ‍್ಥಿಗಳು ಆಗಿದ್ದಾರೆ. ಶಾಲೆಗೆ ರಜೆ ಇದ್ದಿದ್ದರಿಂದ ಈಜಾಡಲು ತೆರಳಿದ್ದರು. ಮೃತ ವಿದ್ಯರ‍್ಥಿಗಳಲ್ಲಿ ಒಬ್ಬರ ಶವ ದೊರೆತಿದೆ. ಇನ್ನೊಬ್ಬನ ಶವಕ್ಕಾಗಿ ಶೋಧ ಕರ‍್ಯಾಚರಣೆಯನ್ನು ಅಗ್ನಿಶಾಮಕ ಸಿಬ್ಬಂದಿ ಮುಂದುವರಿಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ