ತೆರಿಗೆ ಕಡಿತಗೊಳಿಸಲು ಪ್ರಧಾನಿ ಒಪ್ಪಿಕೊಂಡರು

Spread the love

ಕೇಂದ್ರ ವಿತ್ತ ಸಚಿವೆ ನರ‍್ಮಲಾ ಸೀತಾರಾಮನ್‌ ಅವರು ಸಸತ ೮ ನೇ ಬಾರಿಗೆ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್‌ ಮಧ್ಯಮ ರ‍್ಗದವರಿಗಾಗಿ ಎಂದು ಹೇಳಿರುವ ಅವರು ವರ‍್ಷಿಕ ೧೨ ಲಕ್ಷ ಆದಾಯದವರೆಗೆ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಲಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಭಾನುವಾರ ಸಂರ‍್ಶನವೊಂದರಲ್ಲಿ ಮಾತನಾಡಿದ ಸಚಿವೆ ತೆರಿಗೆ ಕಡಿತದ ಕಲ್ಪನೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಜೆಟ್‌ನಲ್ಲಿ ಪರಿಚಯಿಸಲಾದ ತೆರಿಗೆ ಕಡಿತಗಳಿಗೆ ಸಂಪರ‍್ಣ ಬೆಂಬಲ ನೀಡಿದ್ದಾರೆ, ಆದರೆ ತೆರಿಗೆ ಕಡಿತದ ಬಗ್ಗೆ ಅಧಿಕಾರಿಗಳನ್ನು ಮನವೊಲಿಸಲು ಸಾಕಷ್ಟು ಸಮಯ ಹಿಡಿಯಿತು ಎಂದು ಹೇಳಿದರು. ದೇಶದ ಬಡವರಿಗೆ, ಮಧ್ಯಮ ರ‍್ಗದವರಿಗೋಸ್ಕರ ಪ್ರಧಾನಿ ಈ ನರ‍್ಧಾರವನ್ನು ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
೨೦೨೫-೨೬ರ ಬಜೆಟ್ ಕುರಿತು ನೀಡಿದ ತಮ್ಮ ಮೊದಲ ವೀಡಿಯೊ ಸಂರ‍್ಶನದಲ್ಲಿ ನರ‍್ಮಲಾ ಸೀತಾರಾಮನ್, ತೆರಿಗೆ ಪರಿಹಾರ ಕ್ರಮಗಳ ಹಿಂದಿನ ತರ‍್ಕಿಕತೆಯನ್ನು ವಿವರಿಸಿದರು. ಕೆಲವು ಸಮಯದಿಂದ ಕೆಲಸದಲ್ಲಿರುವ ಎರಡು ವಿಷಯಗಳಿವೆ. ಒಂದು ನೇರ ತೆರಿಗೆ ಸರಳವಾಗಿರಬೇಕು ಮತ್ತು ಅನುಸರಣೆಗೆ ಸುಲಭವಾಗಿರಬೇಕು ಎಂಬ ಚಿಂತನೆ. ಆದಾಯ ತೆರಿಗೆ ಕಾಯ್ದೆಯ ಸಂಕರ‍್ಣ ರಚನೆಗೆ ಸರಳೀಕರಣದ ಅಗತ್ಯವಿದೆ ಎಂದು ಹೇಳಿದರು.
ನಾವು ಹೊಸ ಆದಾಯ ತೆರಿಗೆ ಕಾಯ್ದೆಯನ್ನು ತಯಾರಿಸಲು ಆರು ತಿಂಗಳು ತೆಗೆದುಕೊಂಡಿದ್ದೇವೆ. ನಾನು ಎಲ್ಲಿಯೇ ಪ್ರಯಾಣಿಸಿದರೂ ನನಗೆ ಜನರು ಕೇಳುವುದು ಒಂದೇ ಪ್ರಶ್ನೆ ಆಗಿತ್ತು. ನಾವು ಪ್ರಾಮಾಣಿಕ ತೆರಿಗೆದಾರರು, ಆದರೆ ನೀವು ನಮಗಾಗಿ ಏನು ಮಾಡಬಹುದು ಎಂಬುದರ ಕುರಿತು ಯೋಚಿಸಬಹುದೇ ಎಂದು ಕೇಳುತ್ತಿದ್ದರು. ಅದಕ್ಕಾಗಿಯೇ ನಾನು ಈ ವಿಷಯದ ಕುರಿತು ಪ್ರಧಾನ ಮಂತ್ರಿಗಳ ಜೊತೆ ರ‍್ಚೆ ನಡೆಸಿದ್ದೆ ಎಂದು ಅವರು ಹೇಳಿದ್ದಾರೆ.

error: Content is protected !!