ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ದಂಧೆ

Spread the love

ಕೋಳಿ ಶಡ್‌ನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡ‌ರ್ ಫಿಲಿಂಗ್‌ಅಡ್ಡೆಯ ಮೇಲೆ ಕೊರಟಗೆರೆ ಪಿಎಸೈ ಚೇತನ್ ಕುಮಾರ್ ನೇತೃತ್ವದ ತಂಡದಿಂದ ದಾಳಿ ಮಾಡಿ ೧೩೭ ಸಿಲಿಂಡರ್, ಒಂದುಟಾಟಾ ಇಂಟ್ರಾಗೂಡ್ಸ್‌ ಗಾಡಿ ರ‍್ವ ಆರೋಪಿಯನ್ನ ಬಂಧಿಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಕೊರಟಗೆರೆ ತಾಲೂಕಿನ ಸಿ.ಎನ್.ದರ‍್ಗ ಹೋಬಳಿಯ ಬುಕ್ಕಾ ಪಟ್ಟಣ ಸಮೀಪ ಬುಕ್ಕಾ ಪಟ್ಟಣ ರ‍್ವೆ ನಂ೯೮ ರಲ್ಲಿ ಫಾತಿಮಾ ಬಿನ್ ಸೈಯದ್ ಜಮೀಲ್ ಬಾಷ ಎನ್ನವವರಿಗೆ ಸೇರಿದ ಕೋಳಿ ಫಾರಂ ಶಡ್‌ನಲ್ಲಿ ಅಕ್ರಮವಾಗಿ ಸಿಲಿಂಡರ್‌ಗಳನ್ನ ಫಿಲಿಂಗ್ ಮಾಡುತ್ತಿರುವುದನ್ನ ಖಚಿತ ಮಾಹಿತಿ ಆಧರಿಸಿ ಪಿಎಸೈ ಚೇತನ್ ಕುಮಾರ್ ಅವರ ತಂಡ ದಾಳಿ ಮಾಡಿಬಡವರಿಗೆ ನೀಡುವಉಜ್ವಲ್‌ ಯೋಜನೆಯ ಗೃಹ ಬಳಕೆಯ ೭೫ ಸಿಲಿಂಡರ್‌ ಹಾಗೂ ೬೨ ಕರ‍್ಷಿಯಲ್ ಸಿಲಿಂಡರ್‌ಗಳನ್ನ ಹಾಗೂ ಕೆ.ಎ. ೪೧ ಎಎ ೧೨೭೦ ಸಂಖ್ಯೆಯ ಒಂದು ಗೂಡ್ಸ್ ಗಾಡಿ ಮತ್ತು ಆಕ್ಟಿವಾ ಬೈಕ್‌ ವಶಪಡಿಸಿಕೊಂಡಿದ್ದಾರೆ. ಕೋಳಿ ಫಾರಂನಲ್ಲಿ ಬೆಂಗಳೂರಿನ ನಂದೀನಿ ಲೇಔಟ್‌ನಲಕ್ಷ್ಮೀ ಭಾರತ್ ಗ್ಯಾಸ್ ಏಜೆನ್ಸಿಅವರ ಬಿಲ್‌ಗಳು ಗೂಡ್ಸ್ ಗಾಡಿದೊರೆತ್ತಿವೆ.
ಇದರಜೊತೆಗೆ ಇಂಡಿಯನ್ ಕರ‍್ಷಿಯಲ್ ಸಿಲಿಂಡರ್‌ಗಳು, ಅಗ್ನಿಗ್ಯಾಸ್ ಸಿಲಿಂಡರ್‌ಗಳು ದೊರೆತ್ತಿವೆ. ಅಕ್ರಮವಾಗಿ ಸಿಲಿಂಡರ್ ಫೀಲ್ ಮಾಡುತ್ತಿದ್ದ ಬೆಂಗಳೂರು ಮೂಲದ ಶ್ರೀನಿವಾಸ್ ಮಗನಾದ ರಘು ಎಂಬಾತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಉಳಿದ ಇಬ್ಬರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ರ‍್ಕಾರ ಬಡವರಿಗೆ ಉಚಿತವಾಗಿ ಗ್ಯಾಸ್ ಸರ‍್ಪಕ ನೀಡಲಾಗಿದ್ದು, ಗೃಹ ಉಪಯೋಗಿಸಿಲಿಂಡರ್ ನೀಡಲಾಗಿದ್ದು, ಕೇಂದ್ರ ರ‍್ಕಾರ ಬಡವರ ಅನುಕೂಲಕ್ಕಾಗಿ ಗೃಹ ಉಪಯೋಗಿ ಸಿಲಿಂಡರ್ ೮೩೦ಕ್ಕೆ ನೀಡಲಾ ಗುತ್ತಿದ್ದು, ಅದನ್ನೇ ಬಂಡವಾಳ ಮಾಡಿ ಕೊಂಡಕದ್ದಿ ಮರ ಗುಂಪು, ವಾಣಿಜ್ಯ ಉಪ ಯೋಗಕ್ಕೆ ಬಳಸುವದೊಡ್ಡ ಸಿಲಿಂಡರ್‌ಗಳಿಗೆ ರ‍್ಗಾವಣೆ ಮಾಡಿಕೊಂಡು ಹೋಟೆಲ್, ಬೇಕರಿ, ಫ್ಯಾಕ್ಟರಿಗಳಿಗೆ ಸೇರಿದಂತೆ ಇನ್ನೂ ಅನೇಕ ಕಡೆ೨ ಸಾವಿರಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಅನಿಲ್, ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ದಾಳಿ ವೇಳೆ ಸಿಬ್ಬಂದಿಗಳಾದ ಎಎಸೈ ಗಂಗಾಧರಪ್ಪ, ಪೇದೆಗಳಾದ ದೊಡ್ಡಲಿಂಗಯ್ಯ, ಮೋಹನ್, ದಯಾನಂದ್, ರಾಮಚಂದ್ರ, ನವೀನ್, ಸಿದ್ದರಾಮು, ಸೇರಿದಂತೆ ಇತರರು ಇದ್ದರು.

error: Content is protected !!
12:59