ಮಹಿಳೆಯೊಬ್ಬರು ಆಟೋದಲ್ಲಿ ಕುಳಿತು ಬಟ್ಟೆ ಖರೀದಿಸಲೆದಂದು ಬಟ್ಟೆ ಅಂಗಡಿಗೆ ಹೋಗುತ್ತಿದ್ದಾಗ ಅವರ ವ್ಯಾನಿಟಿ ಬ್ಯಾಗ್‍ನಲ್ಲಿಟ್ಟಿದ್ದ ೧.೧೩ ಲಕ್ಷ ರೂ.ಮೌಲ್ಯದ ಬಂಗಾರದ ಲಾಕೆಟ್, ೨೩ ಸಾವಿರ ರೂ. ೩ ಗ್ರಾಂ.ಬಂಗಾರದ ಉಂಗುರ, ೫ ಸಾವಿ ರೂ.ನಗದು, ಎಟಿಎಂ ಮತ್ತು ಪ್ಯಾನ್‍ಕರ‍್ಡ್ ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಕಮಲಾಪೂರ ತಾಲ್ಲೂಕಿನ ನವಣಿಹಾಳ ಗ್ರಾಮದ ರೇಷ್ಮಾ ಪಟೇಲ್ ಎಂಬುವವರು ನಗರದ ಸರಾಫ್ ಬಜಾರ್‍ದಲ್ಲಿರುವ ಬಂಗಾರದ ಅಂಗಡಿಯೊಂದರಲ್ಲಿ ಒಂದುವರೆ ತೊಲಿ ಗಟ್ಟಿ ಬಂಗಾರ ಖರೀದಿಸಿ ಬಂಗಾರದ ಲಾಕೆಟ್ ಮಾಡಿಸಲು ಅಂಗಡಿಯವರಿಗೆ ಹೇಳಿದ್ದರು. ಅವರು ಲಾಕೆಟ್ ರೆಡಿಯಾದ ಮೇಲೆ ಬಂದು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು. ಬಂಗಾರದ ಲಾಕೆಟ್ ರೆಡಿಯಾದ ಮೇಲೆ ರೇಷ್ಮಾ ಅವರು ಅಂಗಡಿಗೆ ಹೋಗಿ ಅದನ್ನು ತೆಗೆದುಕೊಂಡು ವ್ಯಾನಿಟಿ ಬ್ಯಾಗ್‍ನಲ್ಲಿ ಇರುವ ಸಣ್ಣ ರ‍್ಸ್‍ನಲ್ಲಿ ಹಾಕಿದ್ದರು. ಅದರ ಜೊತೆಗೆ ೨೩ ಸಾವಿರ ರೂ.ಮೌಲ್ಯದ ೩ ಗ್ರಾಂ.ಬಂಗಾರದ ಉಂಗುರ, ೫ ಸಾವಿರ ರೂ.ನಗದು ಮತ್ತು ಎಟಿಎಂ, ಪ್ಯಾನ್‍ಕರ‍್ಡ್ ಸಹ ರ‍್ಸ್‍ನಲ್ಲಿ ಇಟ್ಟಿದ್ದರು. ನಂತರ ಬಟ್ಟೆ ಖರೀದಿಸಲೆಂದು ಆಟೋದಲ್ಲಿ ಕುಳಿತು ಬಟ್ಟೆ ಅಂಗಡಿಗೆ ಹೋಗುತ್ತಿದ್ದಾಗ ರ‍್ಸ್‍ನಲ್ಲಿ ಇಟ್ಟಿದ್ದ ಲಾಕೇಟ್, ಬಂಗಾರದ ಉಂಗುರ, ನಗದು ಹಣ, ಎಟಿಎಂ ಮತ್ತು ಪ್ಯಾನ್ ಕರ‍್ಡ್ ಕಳವಾಗಿವೆ. ಈ ಸಂಬಂಧ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.