ಭೀಮಾತೀರದ ನಟೋರಿಯಸ್ ಹಂತಕ ಬಾಗಪ್ಪ ಕೊಲೆ ಪ್ರಕರಣ ಹಳೆ ವೈಷಮ್ಯದಿಂದ ನಡೆದಿದೆ ಎಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬಾಗಪ್ಪನ ಪುತ್ರಿ ಗಂಗೂಬಾಯಿ ಪೆÇಲೀಸರಿಗೆ ದೂರು ನೀಡಿದ್ದಾಳೆ.
ಕಳೆದ ಆರು ತಿಂಗಳುಗಳ ಹಿಂದೆ ವಿಜಯಪುರದಲ್ಲಿ ವಕೀಲ ರವಿ ಅಗರಖೇಡ ಎಂಬುವರ ಭೀಕರ ಹತ್ಯೆಯಾಗಿತ್ತು. ನಗರದ ಮುರಾಣಕೇರಿ ಬಡಾವಣೆ ಬಳಿ ವಕೀಲ ರವಿ ಅವರಿಗೆ ಕಾರು ಡಿಕ್ಕಿ ಹೊಡಿಸಿ ಸುಮಾರು ಎರಡು ಮೂರು ಕಿಲೋಮೀಟರ್ ವರೆಗೆ ಅಪಘಾತ ನಡೆದ ಬಳಿಕವೂ ಎಳೆದುಕೊಂಡು ಹೋಗಿ ಹತ್ಯೆ ಮಾಡಲಾಗಿತ್ತು. ಈ ವಕೀಲನ ಕೊಲೆ ಹಿಂದೆ ಭಾಗಪ್ಪನ ಸಹಚರರು ಇದ್ದರು ಎಂಬ ಶಂಕೆ ವ್ಯಕ್ತವಾಗಿತ್ತು. ಅದೇ ಸಿಟ್ಟಿನಿಂದ ನಮ್ಮ ತಂದೆಯನ್ನು ರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಬಾಗಪ್ಪನ ಪುತ್ರಿ ಗಂಗೂಬಾಯಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆಯಾದ ರವಿ ಅಗರಖೇಡ ಸಹೋದರ ಪಿಂಟ್ಯಾ ರವಿ ಹಾಗೂ ಆತನ ಸಹಚರರಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಿಂಟ್ಯಾ ಹಾಗೂ ಆತನ ಸಹಚರರ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ. ಸದ್ಯ ಬಾಗಪ್ಪ ಹರಿಜನ ಶವ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ. ಬಾಗಪ್ಪ ಹರಿಜನ ಹತ್ಯೆ ಹಿನ್ನಲೆಯಲ್ಲಿ ಪೆÇಲೀಸರು ವಿಜಯಪುರದಲ್ಲಿ ಹೆಚ್ಚಿನ ನಿಗಾವಹಿಸಿದ್ದಾರೆ. ಹಂತಕರ ಪತ್ತೆಗೆ ವಿಶೇಷ ತಂಡ ರಚನೆ :ಭೀಮಾತೀರದ ನಟೋರಿಯಸ್ ಖ್ಯಾತಿಯ ಹಂತಕ ಭಾಗಪ್ಪ ಹರಿಜನ ಹಂತಕರ ಪತ್ತೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ದುಷ್ರ್ಮಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಭಾಗಪ್ಪ ಹರಿಜನ ಹತ್ಯೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಮದೀನಾ ನಗರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಭಾಗಪ್ಪ ಹರಿಜನ ವಾಸವಾಗಿದ್ದ. ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ರ್ಮಿಗಳು ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಹಾಗೂ ಗÀುಂಡು ಹಾರಿಸಿ ಭಾಗಪ್ಪನನ್ನು ಹತ್ಯೆ ಮಾಡಿದ್ದಾರೆ. ಭಾಗಪ್ಪನ ಮೇಲೆ ೧೦ ಕೇಸ್ಗಳಿವೆ. ಈ ಪೈಕಿ ೬ ರ್ಡರ್ ಕೇಸ್ ಇವೆ. ಭಾಗಪ್ಪನನ್ನು ಕೊಲೆ ಮಾಡಿರುವ ಹಂತಕರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಶೀಘ್ರದಲ್ಲಿಯೇ ದುಷ್ರ್ಮಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.