ಹೊಲದೊಳಗಿಂದ ಓಡಿ ಬಂದ ಜಿಂಕೆಯೊಂದು ಬೈಕಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅಫಜಲಪುರ ತಾಲೂಕಿನ ಇಂಗಳಗಿ ಕ್ರಾಸ್ ಬಳಿ ಸಂಭವಿಸಿದೆ.
ಅಫಜಲಪುರ ಪಟ್ಟಣದ ನಿವಾಸಿಯೊಬ್ಬರು ಬೈಕ್ ಮೇಲೆ ಕಲಬುರಗಿ ಕಡೆಗೆ ಹೊರಟಿದ್ದರು. ಈ ವೇಳೆ ಇಂಗಳಗಿ ಕ್ರಾಸ್ ಬಳಿ ರಸ್ತೆ ಪಕ್ಕದ ಹೊಲದೊಳಗಿಂದ ಓಡಿ ಬಂದ ಜಿಂಕೆ ಬೈಕಿಗೆ ಅಪ್ಪಳಿಸಿದೆ. ಜಿಂಕೆ ಅಪ್ಪಳಿಸಿದ ರಭಸಕ್ಕೆ ಬೈಕ್ ಸ್ಕಿಡ್ ಆಗಿ ಸವಾರ ಕೆಳಗುರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನೆಯ ಮಾಹಿತಿ ಅರಿಯುತ್ತಿದ್ದಂತೆ ಅಫಜಲಪುರ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.