ಜಿಮ್ಸ್ ಆಸ್ಪತ್ರೆಯ ೨ನೇ ಮಹಡಿ ಮೇಲಿಂದ ಬಿದ್ದು ರೋಗಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಕ್ಷಯರೋಗ ಚಿಕಿತ್ಸೆಗೆಂದು ದಾಖಲಾಗಿದ್ದ ನಗರದ ರೋಜಾ (ಬಿ)ಯ ಸೈಯ್ಯದ್ ಅಜರ್ ಮೃತಪಟ್ಟವರು.
ಕ್ಷಯರೋಗದಿಂದ ಬಳಲುತ್ತಿದ್ದ ಸೈಯ್ಯದ್ ಅಜರ್ ಅವರನ್ನು ಜಿಮ್ಸ್ ಆಸ್ಪತ್ರೆಯ ಜನರಲ್ ವರ‍್ಡ್‍ಗೆ ದಾಖಲಿಸಲಾಗಿತ್ತು. ಮದ್ಯ ಸೇವನೆ ಚಟವಿದ್ದ ಸೈಯ್ಯದ್ ಅಜರ್ ಅಂದು ರಾತ್ರಿ ಮದ್ಯ ತಂದು ಕೊಡುವಂತೆ ಪತ್ನಿ ನಾಜೀಯಾ ಬೇಗಂಗೆ ಒತ್ತಾಯಿಸಿದ್ದು, ವೈದ್ಯರು ಮದ್ಯ ಸೇವಿಸಬಾರದು ಎಂದಿದ್ದಾರೆ ಎಂದು ಹೇಳಿದರು ಕೇಳದೇ ಇದ್ದುದ್ದರಿಂದ ಅವರು ಆಸ್ಪತ್ರೆಯ ಹೊರಗಡೆ ಇರುವ ಪರ‍್ಕಿಂಗ್ ಜಾಗದಲ್ಲಿ ಮಲಗಿಕೊಂಡಿದ್ದರು. ಬೆಳಿಗ್ಗೆ ಆಸ್ಪತ್ರೆಯ ಸಿಬ್ಬಂದಿ ಸೈಯ್ಯದ್ ಅಜರ್ ಅವರು ಆಸ್ಪತ್ರೆಯ ೨ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಸುದ್ದಿಯನ್ನು ನಾಜೀಯಾ ಬೇಗಂಗೆ ತಿಳಿಸಿದ್ದಾರೆ. ಕ್ಷಯರೋಗದಿಂದ ಬಳಲುತ್ತಿದ್ದ ಸೈಯ್ಯದ್ ಅಜರ್ ಅದನ್ನು ಮನಸ್ಸಿಗೆ ಹಚ್ಚಿಕೊಂಡು ಆಸ್ಪತ್ರೆಯ ೨ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಇದಕ್ಕೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನರ‍್ಲಕ್ಷ್ಯವೇ ಕಾರಣವಾಗಿದೆ ಎಂದು ನಾಜೀಯಾ ಬೇಗಂ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.