ಮನೆ ಬೀಗ ಮುರಿದು ೨.೮೦ ಲಕ್ಷ ರೂ. ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಉದನೂರ ರಸ್ತೆಯ ಚಂದ್ರಕಾಂತ ಲೇಔಟ್‍ನಲ್ಲಿ ನಡೆದಿದೆ. ವಿಠ್ಠಲ ಶಂಕರರಾವ ಮುಚ್ಚಟ್ಟಿ ಎಂಬುವವರ ಮನೆ ಬೀಗ ಮುರಿದು ಕಳ್ಳರು ೧.೨೦ ಲಕ್ಷ ರೂ.ಮೌಲ್ಯದ ೨೦ ಗ್ರಾಂ.ಬಂಗಾರದ ಎರಡು ಸುತ್ತುಂಗುರ, ೬೦ ಸಾವಿರ ರೂ.ಮೌಲ್ಯದ ೧೦ ಗ್ರಾಂ.ಬಂಗಾರದ ಚೈನ್, ೧ ಲಕ್ಷ ರೂ.ನಗದು ಹಣ ಸೇರಿ ೨.೮೦ ಲಕ್ಷ ರೂ.ಮೌಲ್ಯದ ನಗನಾಣ್ಯವನ್ನು ಕಳವು ಮಾಡಿದ್ದಾರೆ. ಮರ‍್ನಾಲ್ಕು ದಿನಗಳ ಹಿಂದೆ ಅತ್ತೆ-ಮಾವ ಕುಂಭಮೇಳಕ್ಕೆ ಹೋದ ಪ್ರಯುಕ್ತ ಇವರು ಮನೆಗೆ ಬೀಗ ಹಾಕಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ಅಶೋಕನಗರದಲ್ಲಿರುವ ಮಾವನ ಮನೆಗೆ ಹೋಗಿ ವಾಸವಾಗಿದ್ದರು. ಈ ವೇಳೆ ಕಳ್ಳರು ಮನೆ ಬೀಗ ಮುರಿದು ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.