ತಮನ್ನಾ ಭಾಟಿಯಾ ಮತ್ತು ವಿಜಯ್ ರ‍್ಮಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದರ‍್ಘಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಈ ಜೋಡಿ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಬರ‍್ಪಡುವಿಕೆಯ ಸುದ್ದಿಯ ನಂತರ, ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಿಂದ ಪರಸ್ಪರರೊಂದಿಗಿನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಪಿಂಕ್ವಿಲ್ಲಾ ವರದಿಯ ಪ್ರಕಾರ, ತಮನ್ನಾ ಮತ್ತು ವಿಜಯ್ ಕೆಲವು ವಾರಗಳ ಹಿಂದೆ ಬರ‍್ಪಟ್ಟಿದ್ದರು. ಆದರೆ ಅವರು ಇನ್ನೂ ಅದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ತಮನ್ನಾ ಮತ್ತು ವಿಜಯ್ ಅವರ ಮದುವೆಗಾಗಿ ಕಾಯುತ್ತಿದ್ದ ಇವರ ಅಭಿಮಾನಿಗಳು ಈ ಸುದ್ದಿ ಕೇಳಿ ಬೇಸರಗೊಂಡಿದ್ದಾರೆ. ಅವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗಲೆಲ್ಲಾ ಜನರು ಮದುವೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಫೋಟೋಗಳನ್ನು ಅಳಿಸಿದ ನಂತರ, ಬ್ರೇಕಪ್ ವದಂತಿಗಳು ಇನ್ನಷ್ಟು ಜೋರಾಗುತ್ತಿವೆ. ವರದಿಗಳ ಪ್ರಕಾರ, ತಮನ್ನಾ ಮತ್ತು ವಿಜಯ್ ತಮ್ಮ ಸ್ನೇಹವನ್ನು ಉಳಿಸಿಕೊಳ್ಳಲು ನರ‍್ಧರಿಸಿದ್ದಾರೆ. ಪರಸ್ಪರ ಉತ್ತಮ ಸ್ನೇಹಿತರಾಗಿ ಉಳಿಯಲಿದ್ದಾರೆ. ಈಗ ಇಬ್ಬರೂ ತಮ್ಮ ತಮ್ಮ ವೃತ್ತಿಜೀವನದತ್ತ ಗಮನ ಹರಿಸಲಿದ್ದಾರೆ.