ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸಂಚಲನ ಮೂಡಿಸಿರುವ ಸೌಜನ್ಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದಶಕಗಳಿಗೂ ಹಿಂದಿನ ಪ್ರಕರಣವಾಗಿರುವ ರ್ಮಸ್ಥಳದ ವಿದ್ಯರ್ಥಿನಿ ಸೌಜನ್ಯ ಅವರ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರದ ಪ್ರಕರಣದ ವಿಚಾರ ಈಚೆಗೆ ರ್ಚೆಯ ಮುನ್ನೆಲೆಗೆ ಬಂದಿದ್ದು. ಸೌಜನ್ಯ ಅವರ ರೇಪ್ ಅಂಡ್ ರ್ಡರ್ ಕೇಸ್ಗೆ ಸಂಬಂಧಿಸಿದಂತೆ ಯೂಟ್ಯೂಬರ್ ಸಮೀರ್ ಎಂಡಿ ಎನ್ನುವವರು ಸುದರ್ಘ ವಿಡಿಯೋವೊಂದನ್ನು ಮಾಡಿದ್ದರು. ಇದೀಗ ಸಮೀರ್ ಅವರ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್ಬಝಾರ್ ಪೊಲೀಸ್ ಠಾಣೆಯ ಪೊಲೀಸರು ಇದೀಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಇದೀಗ ಈ ವಿಷಯ ಭಾರೀ ರ್ಚೆಗೆ ಕಾರಣವಾಗಿದೆ.
ಸಮೀರ್ ಅವರ ವಿಡಿಯೋವನ್ನು ಒಂದು ಕೋಟಿಗೂ ಹೆಚ್ಚು ಜನ ನೋಡಿದ್ದು. ಇದೀಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ರ್ಮಸ್ಥಳ ಹಾಗೂ ರ್ಮಾಧಿಕಾರಿ ಮೇಲೆ ಧರ್ಮಿಕ ಭಾವನೆ, ಸರ್ವಜನಿಕರ ಧರ್ಮಿಕ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ವಿಡಿಯೋ ಮಾಡಿರುವ ಆರೋಪ ಕೇಳಿ ಬಂದಿದ್ದು. ಈ ಅಂಶಗಳನ್ನು ಸಮೀರ್ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ನಲ್ಲಿ ಉಲ್ಲೇಖ ಮಾಡಲಾಗಿದೆ.