ಬೆಂಗಳೂರು ನಗರ ರೈಲ್ವೇ ನಿಲ್ದಾಣದ ವೇದಿಕೆ ನಂ : 01 ರಲ್ಲಿ ಹೊಸ ಎಂಸಿಓ ಕಛೇರಿ ಹತ್ತಿರ ಮುಂಭಾಗದಲ್ಲಿ ಜುಲೈ 19 ರಂದು ಅಪರಿಚಿತ ಗಂಡಸು Pಟೈಲ್ಸ್ ಕಲ್ಲಿನ ಮೇಲೆ ಮಲಗಿರುವಲ್ಲಿಯೇ ಸ್ವಾಭಾವಿಕವಾಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೃತನ ಚಹರೆ ವಿವರ: ಸುಮಾರು 5.4 ಅಡಿ ಎತ್ತರ, ಸಾಧಾರಣವಾದ ಶರೀರ, ದುಂಡು ಮುಖ, ಚಪ್ಪಟೆಯಾದ ಮೂಗು, ಗೋಧಿ ಮೈಬಣ್ಣ, ಅಗಲವಾದ ಹಣೆ, ಮುಖದಲ್ಲಿ ಸುಮಾರು ½ ಇಂಚು ಉದ್ದದ ಕಪ್ಪು ಹಾಗೂ ಬಿಳಿ ಬಣ್ಣದ ಮಿಶ್ರಿತ ಕೂದಲು, ಮುಖದಲ್ಲಿ ಸುಮಾರು 02 ಸೆಂ.ಮೀ. ಉದ್ದದ ತೆಳುವಾದ ಗಡ್ಡ-ಮೀಸೆಯನ್ನು ಬಿಟ್ಟಿದ್ದು, ತಲೆಯ ನೆತ್ತಿಯ ಭಾಗದಲ್ಲಿ ಬೋಳತೆಲೆಯಾಗಿರುತ್ತದೆ.
ಮೃತನ ಮೈಮೇಲೆ ಒಂದು ಕ್ರೀಂ ಬಣ್ಣದ ತುಂಬುತೋಳಿನ ರೆಡಿಮೇಡ್ ಅಂಗಿ ಇದೆ. ಒಂದು ನಶೆ ಬಣ್ಣದ ಪ್ಯಾಂಟ್ ಇದೆ. ಒಂದು ಸಿಮೆಂಟ್ ಪೂಮರ್ ಕಂಪನಿಯ ಲೇಬಲ್ ಇರುವ ಅಂಡರ್ ವೇರ್ ಧರಿಸಿರುತ್ತಾರೆ.
ಅಪರಿಚಿತ ಗಂಡಸಿನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆ ಸಂರ್ಪಕಿಸಬಹುದು ಎಂದು ನಗರ ರೈಲ್ವೇ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.