ಬೆಂಗಳೂರು: ಗಾಂಜಾ ವ್ಯಸನಿಗಳ ಗ್ಯಾಂಗ್ ಒಂದು ಯುವಕನನ್ನು ಕಿಡ್ನಾಪ್ ಮಾಡಿ, ಮನಸೋ ಇಚ್ಚೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಆನೇಕಲ್ನಲ್ಲಿ ನಡೆದಿದೆ. ಆನೇಕಲ್ ಸಮೀಪದ ಮುತ್ತಗಟ್ಟೆಯ ಕುವೆಂಪು ನಗರ ನಿವಾಸಿ ಮುರಳಿ ಎಂಬುವನ ಮೇಲೆ ದುಷ್ಕರ್ಮಿಗಳು ವಿಕೃತವಾಗಿ ಹಲ್ಲೆ ಮಾಡಿದ್ದಾರೆ.