ಗಾಯಗೊಂಡ ಪ್ರಾಣಿಗಳು, ಮನೆಯಿಂದ ಹೊರಹಾಕಲ್ಪಟ್ಟ ಸಾಕುಪ್ರಾಣಿಗಳು ಮತ್ತು ಆರೈಕೆಯ ಅಗತ್ಯವಿರುವ ಪ್ರಾಣಿಗಳನ್ನು ಖಾಸಗಿ ರಕ್ಷಣಾ ಕೇಂದ್ರಗಳಿಗೆ ಕಳುಹಿಸುವ ಬದಲು ಪ್ರಾಣಿಗಳ ಕಲ್ಯಾಣ ಕೇಂದ್ರ ಸ್ಥಾಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಈಗ ದಾಸರಹಳ್ಳಿಯಲ್ಲಿ ತನ್ನದೇ ಆದ ಕೇಂದ್ರವನ್ನು ಸ್ಥಾಪಿಸುತ್ತಿದೆ. ಅಲ್ಲದೆ, ಬೆಂಗಳೂರು ಪೂರ್ವ ಮತ್ತು ದಕ್ಷಿಣದಲ್ಲಿಇದೇ ರೀತಿಯ ಎರಡು ಕೇಂದ್ರಗಳನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂತಹ ಕೇಂದ್ರ ತೆರೆಯಬೇಕು ಎಂಬುದು ಪ್ರಾಣಿ ಕಲ್ಯಾಣ ಕಾರ್ಯಕರ್ತರ ಬಹುದಿನಗಳ ಬೇಡಿಕೆಯಾಗಿತ್ತು.
ಬಿಬಿಎಂಪಿ ಪ್ರತಿ ಕೇಂದ್ರದಲ್ಲಿ ಪ್ರಾಣಿಗಳನ್ನು ನಿರ್ವಹಿಸುವ ಗುರಿ ಹೊಂದಿದೆ ಮತ್ತು ಒಟ್ಟಾರೆಯಾಗಿ ಈ ಮೂರು ಕೇಂದ್ರಗಳಲ್ಲಿ ಪ್ರತಿ ತಿಂಗಳು ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಲಿದೆ.
ಇದುವರೆಗೂ ಬಿಬಿಎಂಪಿ ತನ್ನದೇ ಆದ ಪ್ರಾಣಿ ರಕ್ಷಣಾ ಕೇಂದ್ರವನ್ನು ಹೊಂದಿರಲಿಲ್ಲ. ಪಶುಸಂಗೋಪನಾ ಇಲಾಖೆಗೆ ಪ್ರಾಣಿಗಳ ರಕ್ಷಣೆಗಾಗಿ ಕರೆ ಬಂದಾಗ ಅಥವಾ ಕೈಬಿಟ್ಟ ಮತ್ತು ಗಾಯಗೊಂಡ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಮನವಿ ಬಂದಾಗಲೆಲ್ಲಾ, ನಾವು ಅವುಗಳನ್ನು ಖಾಸಗಿ ರಕ್ಷಣಾ ಕೇಂದ್ರಗಳಿಗೆ ಕಳುಹಿಸುತ್ತಿದ್ದೆವು. ಪ್ರಾಣಿಗಳನ್ನು ಅಲ್ಲಿಯೇ ನೋಡಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಅವು ಸುಧಾರಿಸಿಕೊಂಡ ನಂತರ, ಅವುಗಳನ್ನು ಅದೇ ಸ್ಥಳಕ್ಕೆ ಹಿಂತಿರುಗಿಸಲಾಗುತ್ತಿತ್ತುಎಂದು ಬಿಬಿಎಂಪಿ ಆರೋಗ್ಯ ಮತ್ತು ಪಶುಸಂಗೋಪನೆ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.