ರಾಜಧಾನಿ ಬೆಂಗಳೂರಿನಲ್ಲಿ ಕೇವಲ 24 ಗಂಟೆಯಲ್ಲಿ ವಿಪರೀತ ಚಳಿ ಬೀಸಲಾರಂಭಿಸಿದೆ. ಹವಾಮಾನದಲ್ಲಿ ಉಂಟಾದ ಬದಲಾವಣೆಗಳ ಕಾರಣದಿಂದ ದಿಢೀರ್ ಚಳಿ ಏರಿಕೆ ಆಗಿದೆ. ಇಂದು ಮಂಗಳವಾರ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ. ನಗರದ ಕನಿಷ್ಠ ಚಳಿ ಪ್ರಮಾಣದಲ್ಲಿ 2 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಜನವರಿ 30ರವರೆಗೆ ಇದೇ ರೀತಿ ಚಳಿಯ ವಾತಾವರಣ ಮುಂದುವರಿಯಲಿದ್ದು, ನಂತರ 4 ದಿನಗಳ ಕಾಲ ಮಳೆಯ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.