ಚಿನ್ನಾಭರಣ ದೋಚಿಕೊಂಡು ಪರಾರಿ: ಮೂವರ ಬಂಧನ

Spread the love

ನಗರ ಹೊರ ವಲಯದ ಜೈನಾಪೂರ ಲೇಔಟ್‍ನಲ್ಲಿ ಇರುವ ಮನೆಯೊಂದಕ್ಕೆ ನಾಲ್ವರು ಸುಲಿಗೆಕೋರರು ನುಗ್ಗಿ ಮನೆ ಮಾಲಿಕನ ಮೇಲೆ ಹಲ್ಲೆ ನಡೆಸಿ ೧೫ ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿ ಜನರನ್ನು ಬೆಚ್ಚಿ ಬೀಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಏಕತಾ ನಗರ ನಿವಾಸಿಗಳಾದ ಸುರೇಶ ರ‍್ಫ ವಿಠಲ ಮಧುಕರ ಚವ್ಹಾಣ, ಸುರೇಶ ರ‍್ಫ ಸೂರಜ್ ತುಳಸಿರಾಮ ಚವ್ಹಾಣ ಹಾಗೂ ಆಕಾಶ ರ‍್ಫ ಸುಖದೇವ ರಾವತ್ ಬಂಧಿತ ಆರೋಪಿಗಳು.
ಶಂಕಿತ ದರೋಡೆಕೋರರು ಜ.೧೬ ರಂದು ರಾತ್ರಿ ವಿಜಯಪುರ ನಗರದ ಜೈನಾಪುರ ಲೇಔಟ್‍ನಲ್ಲಿ ಸಂತೋಷ ಕನ್ನಾಳ ಎಂಬುವರ ಮನೆಗೆ ನಾಲ್ವರು ಸುಲಿಗೆಕೋರರು ನುಗ್ಗಿ ಸಂತೋಷ ಅವರಿಗೆ ಚಾಕುವಿನಿಂದ ಇರಿದು ಒಂದನೇ ಮಹಡಿಯಿಂದ ಕೆಳಗೆ ಕೆಡವಿ ಆತನ ಪತ್ನಿ ಕೊರಳಲ್ಲಿದ್ದ ೧೫ ಗ್ರಾಂ ಚಿನ್ನದ ತಾಳಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ನಗರದ ಜನತೆಯಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿತ್ತು.
ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖಾ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಕೊನೆಗೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ನಗರದ ಜನತೆ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.
ಸುಲಿಗೆಕೋರರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಅವರ ಮರ‍್ಗರ‍್ಶನದಲ್ಲಿ, ಡಿಎಸ್ಪಿಗಳಾದ ಬಸವರಾಜ ಯಲಿಗಾರ, ಸುನೀಲ ಕಾಂಬಳೆ, ಪೊಲೀಸ್ ಇನ್ಸಪೆಕ್ಟರ್ ಪ್ರದೀಪ ತಳಕೇರಿ, ಪಿಎಸ್‍ಐಗಳಾದ ರಾಜು ಮಮದಾಪೂರ, ಸೋಮೇಶ ಗೆಜ್ಜಿ, ವಿನೋದ ಪೂಜಾರಿ ಹಾಗೂ ಸಿಬ್ಬಂದಿ ಒಳಗೊಂಡ ವಿಶೇಷ ತನಿಖಾ ತಂಡ ಆರೋಪಿತರನ್ನು ಬಂಧಿಸಿ ಸರ‍್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

error: Content is protected !!