ವರ್ಷಗಳ ನಂತರ ’ಸನಮ್ ತೇರಿ ಕಸಮ್’ ಮರುಬಿಡುಗಡೆ

Spread the love

ಇತ್ತೀಚಿನ ದಿನಗಳಲ್ಲಿ ಹೊಸ ಫಿಲ್ಮ್ ಗಳ ಬದಲು ಹಳೆ ಚಿತ್ರಗಳ ಕ್ರೇಜ್ ಥಿಯೇಟರ್‌ಗಳಲ್ಲಿ ಹೆಚ್ಚುತ್ತಿದೆ. ಒರಿಜಿನಲ್ ರಿಲೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣದ ಚಿತ್ರಗಳೂ ಕೆಲವೊಮ್ಮೆ ಮರುಬಿಡುಗಡೆಯಲ್ಲಿ ಸದ್ದು ಮಾಡುತ್ತಿವೆ. ಲೈಲಾ-ಮಜ್ನು ಮತ್ತು ತುಂಬಾಡ್ ನಂತರ ಸನಮ್ ತೇರಿ ಕಸಮ್ ಈ ದಿನಗಳಲ್ಲಿ ಚಿತ್ರಮಂದಿರಗಳನ್ನು ಆಳುತ್ತಿದೆ.
ಸನಮ್ ತೇರಿ ಕಸಮ್ ೫ ಫೆಬ್ರವರಿ ೨೦೧೬ ರಂದು ಚಿತ್ರಮಂದಿರಗಳಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಚಿತ್ರದ ಹಾಡುಗಳು ಮತ್ತು ಕಥೆಗಳು ಹೊಸದಾಗಿದ್ದವು, ಆದರೆ ವಿಮರ್ಶಕರು ಮಿಶ್ರ ವಿಮರ್ಶೆಗಳನ್ನು ನೀಡಿದರು. ಯಾಕೋ ಏನೋ ಆ ಸಮಯದಲ್ಲಿ ಚಿತ್ರವು ವಿಫಲವಾಯಿತು. ಆದರೆ ಇಂದು ಈ ಫಿಲ್ಮ್ ಪ್ರೇಕ್ಷಕರ ಮೊದಲ ಆಯ್ಕೆಯಲ್ಲಿ ಸೇರಿಕೊಂಡಿದೆ. ಹೃದಯಸ್ಪರ್ಶಿ ಕಥೆಯನ್ನು ಹಿರಿತೆರೆಯಲ್ಲಿ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳುತ್ತಿದ್ದಾರೆ.
ಸನಮ್ ತೇರಿ ಕಸಮ್ ಫೆಬ್ರವರಿ ೭ ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಯಿತು. ಎರಡೇ ದಿನಗಳಲ್ಲಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ಸೃಷ್ಟಿಸಿದೆ. ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ೪ ಕೋಟಿ ರೂ.ಗಳೊಂದಿಗೆ ಚಿತ್ರ ತನ್ನ ಖಾತೆಯನ್ನು ತೆರೆದರೆ, ಎರಡನೇ ದಿನವೂ ಭರ್ಜರಿ ವ್ಯಾಪಾರ ಮಾಡಿದೆ.ಸನಮ್ ತೇರಿ ಕಸಮ್ ಎರಡನೇ ದಿನ ಅಂದರೆ ಶನಿವಾರ ೫ ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಎರಡು ದಿನದ ಕಲೆಕ್ಷನ್ ಸುಮಾರು ೯ ಕೋಟಿ ರೂ.ದಾಟಿತು.

error: Content is protected !!